ಸತ್ಯ ಜ್ಞಾನ ತಪೋನಿಧಿಯೇ
ವೀರ್ಯ ಧೈರ್ಯ ತ್ಯಾಗಗಣಿಯೇ|
ಭೃತ್ಯ ಜನರ ನಮನವಿದನು
ಸ್ವೀಕರಿಸು ನರೇಂದ್ರಮುನಿಯೇ||
ಭವದ ಭ್ರಾಂತಿ ಬನಣೆ ನೀಗೆ
ಹರನೆ ನರನ ವೇಷ ತಾಳ್ದೆ
ಕವಿದ ಭ್ರಮೆಯ ಕತ್ತಲಳಿಸಿ
ದಿವ್ಯ ಜ್ಞಾನ ಪ್ರಭೆಯ ತೋರ್ದೆ
ಶಾಂತಿ ಕಾಂತಿ ನೀಡಿದೆ||
ಹೇಡಿ ಜನರ ಹೃದಯದಲ್ಲಿ
ಆತ್ಮಶ್ರದ್ಧೆಶೂನ್ಯರಲ್ಲಿ
ಸಿಡಿಲ ಸ್ನಿಗ್ಧ ಮೊಳಗಿನಿಂದ
ಶಕ್ತಿ ಶ್ರದ್ಧ ಹೊಳೆ ಹರಿಸಿದೆ
ಧೈರ್ಯ ಸ್ಥೈರ್ಯ ಬಿತ್ತಿದೆ||
ಕ್ಲೇಶ ಕಷ್ಟಗ್ರಸ್ತ ಜನಕೆ
ಅಮೃತಸುಖದ ಧಾಮವಾದೆ
ಈಶರೂಪಿ ರಾಮಕೃಷ್ಣ
ಶಿಷ್ಯರತ್ನ ಶಿಖಾಮಣಿಯೇ
ಜ್ಞಾನ ಸೌಖ್ಯದಾತನೆ||
—-ಸ್ವಾಮಿ ತದ್ರೂಪಾನಂದ