ಸಕಲಭಯ ತಲ್ಲಣವ ಪರಿಹರಿಪ ಮಹಿಮನನು
ಒಮ್ಮೆಯಾದರು ಏಕೆ ಕರೆಯದಿರುವೆ|
ಭವಘೋರಭ್ರಮೆಯಲ್ಲಿ ನಿನ್ನ ನೀನೇ ಮರೆತೆ
ಏನೀ ವಿಡಂಬನೆಯು ನಿನಗೆ ತರವೇ||
ಜನಧನದ ಸಂಗದಲಿ ಅವನ ಮರೆಯದ ತೆರದಿ
ಎಚ್ಚರಿರು ಭ್ರಮೆಯನ್ನು ಅತ್ತ ದೂಡು|
ನಿಜವನಾರಾಧಿಸಲು ಸರ್ವಪಾಪವಿಮುಕ್ತ
ನನ್ನ ಮಾತಿನ ನಿಜವನಳೆದು ನೋಡು||
ಭವಜಲಧಿಯನು ದಾಟಿ ನಡೆವ ಮನವಿರೆ ನಿನಗೆ
ಅಳಿಯಾಸೆಗಳ ತೊರೆದು ಹರಿಯ ನುತಿಸು
ದೇಹ ಮನ ಪ್ರಾಣಗಳ ಅವನಿಗರ್ಪಿತ ಮಾಡಿ
ಪ್ರೇಮದಾರಾಧನೆಗೆ ಮನವ ಸಲಿಸು||
—-ವಚನವೇದ