ಸಕಲಕೆಲ್ಲಕೆ ನೀನೇ ಅಕಲಂಕ ಗುರುವೆಂದು
ನಿಖಿಲ ಶಾಸ್ತ್ರವು ಪೇಳುತಿರಲರಿದೆನು||
ಅವರವರ ದರುಶನಕೆ ಅವರವರ ದೇಶದಲಿ
ಅವರವರಿಗೆಲ್ಲ ಗುರು ನೀನೊಬ್ಬನೇ|
ಅವರವರ ಭಾವಕ್ಕೆ, ಅವರವರ ಅರ್ಚನೆಗೆ
ಅವರವರಗೆ ದೇವ ನೀನೊಬ್ಬನೇ||
ಹೋರಾಟವಿಕ್ಕಿಸಲು ಬೇರಾದೆಯಲ್ಲದೆ
ಬೇರುಂಟೆ ಜಗದೊಳಗೆ ಎಲೆ ದೇವನೇ|
ಆರೂ ಅರಿಯರು ನೀನು ಬೇರಾದ ಪರಿಗಳನು
ಮಾರಾರಿ ಶಿವ ಷಡಕ್ಷರಿಲಿಂಗವೆ||
—-ಮುಪ್ಪಿನ ಷಡಕ್ಷರಿ