ಸಂಸಾರ ಸಾಗರವನುತ್ತರಿಸುವಡೆಕಂಸಾರಿ ನಾಮವೊಂದೇ ಸಾಕು ಮರುಳೆ
ಯತಿಯಾಗಬೇಡ ನೀ ವೈರಾಗ್ಯವನೆ ಪಿಡಿದುಸತತ ವ್ರತವ ಮಾಡುವೆನೆಂಬ ಹಮ್ಮು ಬೇಡಶ್ರುತಿಸ್ಮøತಿಯರಿತು ನಡೆವೆನೆಂಬ ಚೇಷ್ಟೆಯು ಬೇಡರತಿಪತಿಪಿತನ ನಾಮವೊಂದೆ ಸಾಕು ಮರುಳೆ ||1||
ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡಅನುದಿನವು ನೀರೊಳಗೆ ಮುಳುಗಿ ನಡುಗಲು ಬೇಡವನಜನಾಭನ ನಾಮ ನೆನೆ ಕಂಡ್ಯ ಮರುಳೆ ||2||
ತೀರ್ಥಯಾತ್ರೆಯ ಮಾಡಿ ಬಹುವಿಧದಲಿ ಬಳಲಿ ಕೃ-ತಾರ್ಥನಾದೆನೆಂಬುವ ಹೆಮ್ಮೆ ಬೇಡಪಾರ್ಥಸಾರಥಿ ಕಾಗಿನೆಲೆಯಾದಿಕೇಶವನಕೀರ್ತನೆಯ ಮಾಡಿ ಮುಕುತಿಯ ಹೊಂದು ಮರುಳೆ ||3||
* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.