ಶ್ರೀ ರಾಮಕೃಷ್ಣಪ್ರಭೋ ದೇವ

ಶ್ರೀ ರಾಮಕೃಷ್ಣಪ್ರಭೋ ದೇವ||ಪ||
ಆರತಿಯೆತ್ತುವೆ ಹರಿಹರಬ್ರಹ್ಮನೆ||ಅ. ಪ||
ಭವಬಂಧನವನು ಖಂಡಿಸುವವನೆ
ನವನವ ರೂಪಧರ||
ಭಕುತರ ಪ್ರೇಮಕೆ ಮಣಿದರು ನಲಿದರು
ನಿಷ್ಕಲ ನಿರುಪಮನೆ||

ಸಂಪದ ರಾಜಪದ ಇಂದ್ರಪದ ಈಯದೆ
ಶ್ರೀಪದ ಕೊಡು ಹರಿಯೇ||

ಹೃದಯಕಮಲದಲಿ ಸತತವು ನೆಲಸುತ
ಮೋದವ ಸುರಿಸು ಗುರೋ||

—-ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *