ಶ್ರೀಹರಿ ಕಾಯೋ ಕರುಣಾನಿಧೇ

ಶ್ರೀಹರಿ ಕಾಯೋ ಕರುಣಾನಿಧೇ||
ಖಗವರಗಮನ ಕರುಣಾನಿಧೇ||

ಜ್ಞಾನ ಧ್ಯಾನದ ನಿಜ ಸಾಧನವರಿಯೆ|
ನೀನೆ ಗತಿಯೆನುತ ಮಾಡುವೆ ನಮನ||

ಘೋರ ಸಂಸಾರದಿ ತಾಪದಿ ನೊಂದೆ|
ವಾರಿಭವಭಯಹರ ಅಘಕುಲಶಮನ||

ಗುರು ಮಹೀಪತಿ ಪ್ರಭು ಅನಾಥಬಂಧು|
ಚರಣಕಮಲಗಳಲಿರಿಸೆನ್ನ ಮನವ||

—-ಮಹೀಪತಿದಾಸ

Leave a Comment

Your email address will not be published. Required fields are marked *