ಶ್ರದ್ಧೆಯ ಸರೋವರದಿ

ಶ್ರದ್ಧೆಯ ಸರೋವರದಿ ತಾಯ ನಾಮದ ನೌಕೆ
ತೇಲುತಿದೆ ನೋಡು|
ಗುರುಕರುಣೆಯಲಿ ಕಲಿತ ಸಾಧನಾದಿಗಳಿಂದ
ಭವಜಲಧಿ ಪಾರವನು ಸೇರಬಹುದು ನಾವು||

ಮೃತ್ಯುಂಜಯನೆ ತಾನು ಹುಟ್ಟುಹಾಕುತಲಿರಲು
ಬಿರುಗಾಳಿಯಲಿ ನೌಕೆ ಮುಳುಗಿ ಹೋಗುವುದೆಂಬ
ಭಯವೇಕೆ ನಿನಗೆ|
ತಾಯ ಶ್ರೀಪಾದವನೆ ನಂಬಿದವಗೆ||

—-ವಚನವೇದ

Leave a Comment

Your email address will not be published. Required fields are marked *