ಶಿವನ ಭಜಿಸಿರೋ (ಪರ) ಶಿವನ…
(ಉಮಾ) ಧವನ ಭಜಿಸಿರೋ||
ಶಿವನ ಭವನ ಉಮಾಧವನ
ಧವಳಾಂಗನ ದಯಾಘನನ|
ಭವದೂರನ ಭಕ್ತಪ್ರಿಯನ
ಕವಿಗೇಯನ ಕಾಮಹರನ|| ಶಿವನ…
ವ್ಯೋಮಕೇಶ ಕಾಮೇಶ್ವರ
ಭೂಮಭದ್ರಗಿರಿನಿವಾಸ|
ರಾಮನಾಮ ನೇಮದಿಂದ
ಭಾಮೆಗೊರೆದ ವಾಮದೇವನ||
ಕಾಲರೂಪ ನೀಲಕಂಠ
ಮೂಲನಾರಾಯಣನ ಭಕುತ|
ವ್ಯಾಲಭೂಷ ಆಶುತೋಷ
ಫಾಲನೇತ್ರನ ಭಕುತಿಯಿಂದ||
—-ಅಚ್ಯುತದಾಸರು