ಶರಣು ಶರಣು
ಶರಣು ಭಾರತಿದೇವಿಗೆ ಶರಣು ವಾಯುರಮಣಿಗೆ
ಶರಣು ಶರಣರ ಪೊರೆವ ಕರುಣಿಗೆ ಶರಣು ಸುರವರ ದೇವಿಗೆ
ಶ್ರಧ್ಧೆ ಭಾರತಿ ಭಾಗ್ಯ ಸಂಪನ್ನೆ ಪದ್ಮ ಮಂದಿರ ನಂದನೆ
ಬುದ್ಧಿ ವರದಾಯಕಳೆ ಕರುಣಾಬ್ಧಿಯೆ ಭಕ್ತರ ಪ್ರಿಯಳೆ ||1||
ಖಗ ಪನ್ನಗ ಗಿರಿಶರಿಂದಲಿ ಮಿಗಿಲೆನಿಪೆ ಶತಗುಣದಲಿ
ಮೃಗನ ನಾಭಿ ನೊಸಲಿಗೊಪ್ಪುವ ಮೃಗಕಲಾನನೆ ದೇವಿಯೆ||2||
ಇಂದ್ರಸೇನಳೆ ವಿಪ್ರಕನ್ನಿಕೆ ಚಂದ್ರಾಧಿಷ್ಠನ ವಾಸಳೆ
ಇಂದ್ರನುತ ಸಿರಿ ವಿಜಯವಿಠ್ಠಲನ ವಂದಿಪ ದ್ರೌಪದಿ ದೇವಿಯೆ||3||