ಶರಣಾಗು ಶರಣಾಗು ಶರಣಾಗು ಮನವೇ
ಶ್ರೀಗುರುಚರಣ ಸರೋಜಕೆ ಮಣಿದು||
ರಾಮಕೃಷ್ಣ ಗುರುಕೃಪೆ ನಿನಗಾದರೆ
ಹರಿವುದು ಭವಭಯ ಚಿಂತಾರುಜಿನ|
ಶ್ರೀಗುರುನಾಮದ ನೌಕೆಯು ದೊರೆತರೆ
ಭವಸಾಗರ ಯಾನವೆ ಮೋದಕರ||
ಎಲ್ಲ ಧರ್ಮಗಳ ತಿರುಳನು ಸಾರುವ
ನೊಂದ ಜೀವರಿಗೆ ಭರವಸೆಯೀಯುವ|
ರಾಮಕೃಷ್ಣ ಸಂದೇಶ ಗೀತೆಯ
ಸಾಗರದಲೆಗಳು ಹಾಡುತಿವೆ||
ಭವ್ಯ ಹಿಮಾಲಯ ಪರ್ವತರಾಜಿಯು
ಮುಳುಗಿರೆ ಧ್ಯಾನ ಸಮಾಧಿಯಲಿ|
ರಾಮಕೃಷ್ಣ ಜಯ ರಾಮಕೃಷ್ಣ ಜಯ
ಎಂಬೀ ನಿನದವು ಕೇಳುತಿದೆ||
—-ಪ್ರಭುಪ್ರಸಾದ
Can you give English transliteration of
Sharanaagu sharanaagu song please?
śaraṇāgu śaraṇāgu śaraṇāgu manavē
śrīgurucaraṇa sarōjakē maṇidu ||
rāmakṛṣṇa gurukṛpē ninagādarē
harivudu bhavabhaya cintārujina |
śrīgurunāmada naukeyu dorētarē
bhavasāgara yānavē mōdakara ||
ella dharmagaḷa tiruḷanu sāruva
nonda jīvarigē bharavaseyīyuva |
rāmakṛṣṇa sandēśa gītēya
sāgaradalēgaḷu hāḍutivē ||
bhavya himālaya parvatarājiyu
muḷugirē dhyāna samādhiyali |
rāmakṛṣṇa jaya rāmakṛṣṇa jaya
ēmbī ninadavu kēḷutidē ||
—Prabhuprasāda