ವಾರಿಜ ಮುಖಿ ವಾರಿಜಾಕ್ಷಿ ವಾರಿಜ ಗಂಧಿ

ವಾರಿಜ ಮುಖಿ ವಾರಿಜಾಕ್ಷಿ ವಾರಿಜ ಗಂಧಿ ವಾರಿಸನಳಿಯನನುಓರಂತೆ ನೀ ಪೋಗಿ ಕರೆತಾರೆನ್ನಯ ಪ್ರಾಣಾಧಾರ ಕೇಶವ ಮೂರ್ತಿಯ

ನಗ ವೈರಿಯಣುಗನಣ್ಣನಯ್ಯನಾಪ್ತಗೆ ಮಿಗೆ ಹುಟ್ಟಿದನ ತಮ್ಮನಸೊಗಸು ವಸ್ತ್ರಕೆ ಸೋತನ ಸುರಪುತ್ರನ ವಾಜಿಯನಿವ ವೈರಿಯ ಪಗೆಯಜಗದೊಳಗೆ ಹಾಟಿದೊಳೇರಾಟದ ವನವ… ನವನಿಂದ ನಗೆತೋರಿನಾವುನಿನಗೆಅಗಣಿತಾಭರಣವೀವೆನು ಅಂಗಜಾಗ್ನಿಯ ತಗಹ ಬಿಡಿಸೆ ತರುಣಿ ||1||

ಮಿಹಿರ ನಂದನನ ತಂದೆಯ ಪಗೆಯವನ ಮಾವನ ಹಿತನ ಮನೆವೆಸರಮಹಿ ವನ ಕೃತಿಗೊಡೆಯನ ಬಂಟನನುಜನ ಸಹಿಸಿ ತಮ್ಮನ ಮಿತ್ರನ ಕುಹಕದಿ ಶಾಪವಡೆದಳು ಪ್ರಸ್ತರವಾಗಿ ಗಗನ ಮಧ್ಯದೊಳಿರಲು…ಸಿ ಶಾಪವ ದನುಜ… ಕ್ಷಿತಿಯೊಳು ವಿವರಿಸುವವನ ಕರೆತಾರೆ ||2||

ಸುರಭೇದ ಪ್ರಥಮ ದಾಸಿಯ ಪೆಸರನ ವಾಜಿಯರಸನ ನಖವೈರಿಯಮರೆಯ ಮಾರ್ಗದಿ ಗಮಿಸುವನಾಪ್ತನ ತಾಯ ಧರಿಸಿದಾತನ ಮಿತ್ರನಪೊರೆಯ ದೆಸೆಯ ದಿಕ್ಕರಿಯ ಕೋಪದಿ ಸೀಳ್ದನರಸಿಯಣ್ಣನನೀಕ್ಷಣಕರೆತಂದೆನಗೆ ಕೂಡಿಸು ಕಾಗಿನೆಲೆಯಾದಿಕೇಶವನ ||3||

Leave a Comment

Your email address will not be published. Required fields are marked *