ವರವ ಕೊಡು ಎನಗೆ ವಾಗ್ದೇವಿ

ವರವ ಕೊಡು ಎನಗೆ ವಾಗ್ದೇವಿ – ನಿಮ್ಮಚರಣ ಕಮಲಂಗಳ ದಯಮಾಡು ದೇವಿ

ಶಶಿ ಮುಖದ ನಸುನಗೆಯ ಬಾಲೆಎಸೆವ ಕರ್ಣದ ಮುತ್ತಿನೋಲೆನಸುನಗುವ ಸುಪಲ್ಲ ಗುಣಶೀಲೆ – ದೇವಿಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ ||1||

ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿಗಳ ನಾಸಿಕದ ರಂಭೆಜೊಂಪು ಮದನನ ಪೂರ್ಣ ಶಕ್ತಿ ಬೊಂಬೆ – ಒಳ್ಳೆಸಂಪಗೆ ಮುಡಿಗಿಟ್ಟು ರಾಜಿಪ ಶಾರದಾಂಬೆ||2||

ರವಿಕೋಟಿ ತೇಜಪ್ರಕಾಶೆ – ಮಹಾಕವಿ ಜನರ ಹೃತ್ಕಮಲ ವಾಸೆಅವಿರಳ ಪುರಿ ಕಾಗಿನೆಲೆಯಾದಿಕೇ-ಶವನ ಸುತನಿಗೆ ಸನ್ನುತ ರಾಣಿವಾಸೆ ||3||

Leave a Comment

Your email address will not be published. Required fields are marked *