ಲಟಪಟ ನಾ ಸಟೆಯಾಡುವೆನಲ್ಲ ಪೋದೆನಲ್ಲ

ಲಟಪಟ ನಾ ಸಟೆಯಾಡುವೆನಲ್ಲ ಪೋದೆನಲ್ಲ ವಿಠಲನ ನಾಮ ಮರೆತು

ಶೇಷಗಿರಿಯ ಮೇಲೆ ಸವುತೆಯ ಬಿತ್ತಿದೇವಗಿರಿಯ ಮೇಲೆ ಅವತಾರವಿಕ್ಕಿಹಾಳೂರಿನೊಳಗೊಬ್ಬ ಕುಂಬಾರ ಸತ್ತಗೋಕರ್ಣದೊಳಗೊಬ್ಬ ಪರದೇಶಿ ಅತ್ತ ||1||

ಆ ಸಮಯದಿ ಮೂರು ರಾಯರ ಕಂಡೆಕುಪ್ಪುಸ ತೊಟ್ಟ ಕೋಳಿಯ ಕಂಡೆಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆನರೆಸೂಳೆ ಗೆಯ್ವುದ ಕಣ್ಣಾರೆ ಕಂಡೆ ||2||

ನುಸಿಯೊಂದು ರೊಟ್ಟಿಯ ಸುಡುವುದ ಕಂಡೆಆಡೊಂದು ಮದ್ದಳೆ ಬಡಿವುದ ಕಂಡೆಕಪ್ಪೆ ತತ್ಥೈ ಎಂದು ಕುಣಿವುದ ಕಂಡೆಬಾಡದಾದಿಕೇಶವನ ಕಣ್ಣಾರೆ ಕಂಡೆ||3||

Leave a Comment

Your email address will not be published. Required fields are marked *