ರಾಮಾನುಜ ಮತೋದ್ಧಾರಕ

ರಾಮಾನುಜ ಮತೋದ್ಧಾರಕತಾಮಸಗುಣಪಾಶಗಿರಿವಜ್ರದಂಡ

ವ್ಯಾಸರ ತೋಳೆಂದು ನಂದಿಯ ಧ್ವಜದಲ್ಲಿಹೇಸದೆ ಕಟ್ಟಿ ಪೂಜಿಪರು ನೋಡವ್ಯಾಸರದೊಂದು ತೋಳಿಗೆ ಶಿವಶರಣನಸಾಸಿರ ತೋಳ್ಗಳ ತರಿದ ನಮ್ಮಯ್ಯ ||1||

ಹರಿ ಎಂಬ ಶಬ್ದವ ಕೇಳಿ ಪಿಟ್ಟಕ್ಕನುಹರನ ಹೊಟ್ಟೆಯಲ್ಲಿ ಪುಟ್ಟುವೆನೆಂಬಳುಹರಹರ ಎಂಬ ಶೈವರ ಏಳ್ನೂರುಶಿರಗಳನರಿದನು ನಮ್ಮ ತಾತಯ್ಯ||2||
|
ಮಸ್ತಕದೊಳು ರುದ್ರ ಪಾದದೊಳಗೆ ವಿಷ್ಣುಮಸ್ತಕ ಮಹಾದೇವ ಮೇಲೆಂಬರುಮಸ್ತಕ ಬಂದು ಪಾದಕೆ ಬಿದ್ದು ಶರಣೆಂಬಮುಕ್ತಿಯ ಪಾದ ಮೇಲು ತಿಳಿದು ನೋಡಣ್ಣ ||3||

ಲಿಂಗವೆ ಘನವೆಂದು ಹೆಚ್ಚಿ ಕುಣಿದಾಡುವಸಂಗನ ಶರಣರೆಲ್ಲರು ಕೇಳಿರಿಲಿಂಗಪ್ರಸಾದವು ಮುಟ್ಟದಂತಾಯಿತು ನಮ್ಮರಂಗನ ಪ್ರಸಾದವು ಲೋಕಪಾವನವು ||4||

ಧರೆಯೊಳು ವಿರಕ್ತರು ವೀರ ಪವಾಡವಇರಿದು ಎಬ್ಬಿಸುವೆವೆಂದಾಡುವರುಹರಿಯ ನಾಮಾವಳಿಯ ಅನುಮಾನವಿಲ್ಲದೆಯೆಧರಿಸಿದಲ್ಲದೆ ದೊರೆಯದು ಗತಿಯಣ್ಣ ||5||

ಹರಬಂದು ಓಂಕಾರ ಗುರುವೆ ಎನ್ನುತ ಕೃಷ್ಣನರಮನೆಯ ಮುಂದೆ ಭಿಕ್ಷವ ಬೇಡಲುಹರಿಯುಂಡ ಮೇಲೆ ಪ್ರಸಾದವ ನೀಡಲುಹರ ಉಂಡು ಬ್ರಹ್ಮ ಹತ್ಯೆ ಕಳಕೊಂಡ ||6||

ಶಿವ ಮಹಾದೇವನು, ಧರೆಗೆ ಹರಿಯೆ ದೈವಭುವನಕ್ಕೆ ಹರಿಹರರೇಕಸ್ಥರುಭವರೋಗ ಹರ ಕಾಗಿನೆಲೆಯಾದಿಕೇಶವನವಿವರ ತಿಳಿದು ಭಜಿಸಿರೊ ಭಕ್ತ ಜನರು||7||

Leave a Comment

Your email address will not be published. Required fields are marked *