ರಾಮಕೃಷ್ಣಾನಂದ ಸ್ವಾಮಿಯೆ

ರಾಮಕೃಷ್ಣಾನಂದ ಸ್ವಾಮಿಯೆ
ನಮ್ಮ ನಮನವು ನಿನಗೆ ಯತಿಯೆ||

ವೇದಶಾಸ್ತ್ರದ ಜ್ಞಾನನಿಧಿಯೆ
ಭೇದದರ್ಶನ ರಹಿತ ಸಂತನೆ
ವಾದದೂರನೆ ಶಾಂತಿಪ್ರಿಯನೆ
ನಮ್ಮ ನಮನವು ನಿನಗೆ ಯತಿಯೆ||

ಹರಿಯ ಪಾದದಿ ಪರಮಭಕುತಿಯು
ಗುರುವಿನಡಿಯಲಿ ಅದುಕು ಮಿಗಿಲು
ಹರಸುತೆಮ್ಮನು ಶಮನಗೊಳಿಸು
ನಮ್ಮ ನಮನವು ನಿನಗೆ ಯತಿಯೆ||

ತ್ಯಾಗಯೋಗದ ಯುಗಳಮೂರ್ತಿಯೆ
ಭಾಗ್ಯವೆಮ್ಮದು ನಿನ್ನ ಕರುಣೆಯೆ
ಹೋಗಲಾಡಿಸು ಭವದ ಬವಣೆ
ನಮ್ಮ ನಮನವು ನಿನಗೆ ಯತಿಯೆ||

—-ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *