ರಂಗ ಬಾರೋ ರಂಗಯ್ಯ ಬಾರೋ – ನೀ
ಬಾರದಿದ್ದರೆ ಎನ್ನ ಪ್ರಾಣ ಉಳಿಯದು
ಅತ್ತಿಗೆ ಮೈದುನ ಬಾರೊ ಅತ್ತೆಯ ಮಗಳ ಗಂಡಅತ್ತಿಗೆ ಮೇಲತ್ತಿಗೆ ನಾದಿನಿ ಸೊಸೆಯ ಗಂಡ||1||
ಮಾವನ ಅಳಿಯನೆ ಬಾರೊ ಮಾವನ ಬೀಗನ ತನುಜಮಾವನ ಮಡದಿಯ ಮಗಳ ತಂಗಿಯ ಗಂಡ ||2||
ಅಂಬುಧಿ ಶಯನನೆ ಬಾರೊ ಆದಿ ವಸ್ತುವೆ ರಂಗಕಂಬದೊಳು ನೆಲಸಿದ ಆದಿಕೇಶವರಾಯ ||3||