ಯೇನೆಲವೊ ದೈವಾ ವೈಕುಂಠನಾಥ

ಯೇನೆಲವೊ ದೈವಾ ವೈಕುಂಠನಾಥ
ನೀ ನಾರಿವೇಷವನು ಧರಿಸಿದ ಬಗೆಯೇನೊ

ದೈತ್ಯರು ಎರಗಿ ದೇವತತಿಗಳು ತಲ್ಲಣಿಸೆ |
ಮಿತ್ರಭಾವದಲಿವರು ಕೂಡಲಿಟ್ಟು |
ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು |
ಮಿತ್ರವೇಷವ ಧರಿಸಿ ಸುರರ ಸಲಹಿದ ಬಗೆಯ ||1||

ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ |
ಕರವ ನೀಡುವೆನೆಂದು ಬರಲಾಗಲು ||
ಅವನೀಶ ಭವಹರ ಕೇಶವ ನೀನೆ ಗತಿಯೆನಲು |
ಯುವತಿ ವೇಷವ ಧರಿಸಿ ಶಿವನ ಸಲಹಿದ ಬಗೆಯಾ ||2||

ಅಂದು ಮಾಡಿದ ಚರಿತೆ ಭಕ್ತಜನರು ಬಂದು |
ಒಂದೊಂದನ ನುಡಿದರನ ಲೀಲೆಂದು |
ಇಂದು ಸತಿವೇಷವನು ಧರಿಸಿ ತೋರಿದಿಯೋ ಪು
ರಂದರ ದಾಸರಿಗೊಲಿದೆ ವಿಜಯವಿಠಲ ಚಲುವಾ||3||

Leave a Comment

Your email address will not be published. Required fields are marked *