ಯಾವ ಫಲ ಬೇಕು ಎನಗೆ
ಜನ್ಮ ಸಫಲವ ಗೈವ
ಫಲವಿರಲು ಸುಮ್ಮಗೆ||
ಮೋಕ್ಷಫಲಗಳ ಬಿಡುವ
ಶ್ರೀರಾಮತರುವಿಹುದು
ನನ್ನ ಎದೆಯೊಳಗೆ||
ಶ್ರೀರಾಮಕಲ್ಪತರು-
ಮೂಲದಲಿ ನಾ ಕುಳಿತು
ಬೇಕಾದ ಪಲಗಳನು
ಪಡೆಯುತಿರುವೆ||
ಪ್ರತಿಫಲವ ನಾ ಬಯಸೆ
ಜಗದ ಕಹಿ ಫಲಗಳನು
ನಿಮ್ಮೊಂದಿಗೇ ಬಿಟ್ಟು
ಮುನ್ನಡೆಯುವೆ||
—-ವಚನವೇದ
ಯಾವ ಫಲ ಬೇಕು ಎನಗೆ
ಜನ್ಮ ಸಫಲವ ಗೈವ
ಫಲವಿರಲು ಸುಮ್ಮಗೆ||
ಮೋಕ್ಷಫಲಗಳ ಬಿಡುವ
ಶ್ರೀರಾಮತರುವಿಹುದು
ನನ್ನ ಎದೆಯೊಳಗೆ||
ಶ್ರೀರಾಮಕಲ್ಪತರು-
ಮೂಲದಲಿ ನಾ ಕುಳಿತು
ಬೇಕಾದ ಪಲಗಳನು
ಪಡೆಯುತಿರುವೆ||
ಪ್ರತಿಫಲವ ನಾ ಬಯಸೆ
ಜಗದ ಕಹಿ ಫಲಗಳನು
ನಿಮ್ಮೊಂದಿಗೇ ಬಿಟ್ಟು
ಮುನ್ನಡೆಯುವೆ||
—-ವಚನವೇದ