ಯಾವದು ಸುಖವೇ ಮತ್ಯಾನಂದವೇ
ಈ ಉಡುಪಿಯ ಯಾತ್ರೆ ಮಾಡಿದ ಮನುಜಗೆ
ಮನದಲಪೇಕ್ಷಿಸೆ ಅವನಿಗೆ ಹದಿನಾಲ್ಕು
ಮನುಗಳು ಭೂಮಿಯನಾಳೋತನಕ
ಕನಕನ ಚಿತ್ತನಾಗಿ ಗೋಕುಲದಿಂದ ಸ
ಜ್ಜನ ಮಾರ್ಗದಲಿ ಗುಣವಂತನೆನಿಸಿಕೊಂಬ ||1||
ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ
ಅಂದೆ ಸುರರೊಳು ಗಣನೆ ಎನ್ನೆ
ಒಂದಕ್ಕೆ ನೂರಾರು ಯಾಗ ಮಾಡಿದ ಫಲ
ತಂದು ಕೊಡುವ ಅಜನಾದಿಕಲ್ಪ ಪರಿಯಂತ||2||
ಅರ್ಧ ಮಾರ್ಗದಿ ಬರಲು ಬಂದು ನಿಲ್ಲಲು ಅವರ
ಸಾಗರದಿ ಕೋಟಿ ಸ್ನಾನ ಮಾಡಲು
ಊಧ್ವರೇತಸ್ಥನಾಗಿರ್ದ ಫಲವಕ್ಕೆ
ಊಧ್ರ್ವಭೂಷಿತನಾದ ಬ್ರಹ್ಮಯುಗ ಪರಿಯಂತ ||3||
ಸನ್ನಿಧಿಗೆ ಬಂದು ಕರವನ್ನೆ ಜೋಡಿಸಿ
ಸನ್ನುತ ಸಾಧನವನು ಮಾಡಲು
ಸನ್ನುತರ ತೆಗೆದು ಜ್ಞಾನ ಭಕುತಿ ಸಂ
ಪನ್ನವಿರಕುತಿಗೆ ಯತಿಗಾದಿ ಮುಖನಾದ||4||
ಶ್ರೀಕೃಷ್ಣ ಕೃಷ್ಣೆಂದು ಕರವ ಜೋಡಿಸಿ ನಿಂದು
ದೃಷ್ಟಿಯಿಂದಲಿ ನೋಡಿದವನೆ ಮುಕ್ತಾ
ಮುಟ್ಟಿ ಭಜಿಸುವರ ಸತ್ಪುಣ್ಯ ವಿಜಯವಿಠ್ಠಲನಾತನೆ ಬಲ್ಲ ಅರುಹಲಳವಲ್ಲ ||5||