ಯಾರಿಗಾರು ಬಹರು ಸಂಗಡ

ಯಾರಿಗಾರು ಬಹರು ಸಂಗಡ – ಮುಂದೆಮೀರಿ ನಡೆದ ಸಂಚಿತ ಕರ್ಮವಂತೆ ಕಂತೆ ಮುಂಗಡ

ಬರೆದ ಬರೆಹ ತೊಡೆದ ಮೇಲೆ ಕರೆದರಾಗ ಹೋಗಬೇಕುನೆರೆದು ಸುತ್ತಮುತ್ತ ಕುಳಿತ ಪರಮ ಬಂಧುವರ್ಗವೆಲ್ಲಇರಿಸಬೇಡಿ ಸುಡುಸುಡೆಂಬರು ಸುಟ್ಟಬಳಿಕಭರದಿ ಬಂದು ಮನೆಯೊಳೆಂಬರು ಪಾಪಿ ಸತ್ತತರುಣಿ ಕೆಟ್ಟಳೆಂದುಕೊಂಬರು ಆತ್ಮ||1||

ಸತಿಯು ಸುತರು ಪುತ್ರಿ ಮಿತ್ರರತಿಶಯದೊಳು ತಂದೆ ತಾಯಿಅತಿ ವಿನೋದಗೈಯುವ ಭಾವ ಜತನವೆಂಬೊ ಅತ್ತೆ ಮಾವಜೊತೆಗೆ ಹುಟ್ಟಿದಣ್ಣ ತಮ್ಮ ಈ ದೇಹ ತಾನುಸತ್ತ ಗಳಿಗೆ ಮುಟ್ಟಲಮ್ಮರು ಬರಿದೆ ನಾವುವ್ಯಥೆಗೆ ಸಿಕ್ಕಿದೆವೆಂಬರು ಆತ್ಮ ||2||

ಕಟ್ಟಿದರ್ಧ ಕರೆವ ಎಮ್ಮೆ ಕೊಂಡುಕೊಂಡ ಸಾಲಕದನುಪೋಟು ಮಾಡಿ ಮಕ್ಕಳೊಡನೆ ಅಷ್ಟು ಹೇಳಿ ಸಾವತನಕದುಷ್ಟ ಜನರು ಸುಮ್ಮನಿರುವರೆ ಕೈಯಲೊದಗಿದಷ್ಟು ಧರ್ಮವನ್ನು ಮರೆವರೆ ಆದಿಕೇಶವನ್ನಮುಟ್ಟಿ ಭಜಿಸಿ ಕಡೆಗೆ ಬಿಡುವರೆ ಆತ್ಮ ||3||

Leave a Comment

Your email address will not be published. Required fields are marked *