ಯಾಯಾ ವಾರವ ನೀಡಿ ಪ್ರೀಯದಿಂದಲಿ ಜನರು
ಬಾಯಲ್ಲಿ ಹರಿಯ ಕೊಂಡಾಡುತ ಪತಿವ್ರತ
ಸ್ತ್ರೀಯರು ಮುದದಿಂದ
ಸಾರುತ ಹರಿದಾಸ ಕೇರಿಯೊಳಗೆ ಬರಲು
ಚೋರತನವ ಮಾಡಿ ಚುದಗು ಬುದ್ಧಿಯಲಿಂದ
ದ್ವಾರವನಿಡದಿರಿ ||1||
ಬಂದಾ ಹರಿದಾಸನ ವಂದಿಸಿ ನಿಮ್ಮಯ
ಮಂದಿರದೊಳು ಕರೆದು ತಂದಿಗಳೆಂದು ನಲು
ವಿಂದಲಿ ಉಪಚರಿಸಿ ||2||
ಪರಲೋಕ ಬಂಧುಗಳೆ ಕರುಣವ ಮಾಡಿದಿರಿ
ನಿರುತ ಮಾಡಿದ ಕರ್ಮ ಪರಿಹರವೆಂದು ನಾ
ಸಿರ ಬಗೆ ಕೊಂಡಾಡುತಾ ||3||
ಪತಿಮತೈಕ್ಯವಾಗಿ ಅತಿಶಯ ಭಕುತಿಯಲಿ
ಗತಿಗೆ ಸಾಧನವೆಂದು ತಿಳಿದು ಈ ಧರ್ಮಕ್ಕೆ
ಪ್ರತಿಕೂಲವಾಗದಲೆ ||4||
ವಕ್ಕಡತಿ ತಂಡುಲವ ಚಕ್ಕನೆ ನೀಡಲು
ಮಕ್ಕಳು ಮರಿಗಳು ಸಹಿತ ನಿತ್ಯಾ
ಸುಖವಕ್ಕು ಸಟಿಯಲ್ಲಾ ||5||
ಇಲ್ಲವೆಂದು ನುಡಿದರೆ ಪುಲ್ಲಲೋಚನವಪ್ಪಾ
ಎಲ್ಲ ಕಾಲದಲಿ ನಿಮ್ಮಂಗಣದೊಳು
ಇಲ್ಲವೆ ನಿಂತಿಪ್ಪದು ||6||
ಹಸ್ತು ಹರಿದಾಸ ಬಂದು ಹೊಸ್ತಿಲಿಂದಲೆ ತಿರಿಗಿ
ವಿಸ್ತರಿಸುವೆ ಕೇಳು ಹರಿ ತೊಲಗುವಾ ದ್ವಿ
ಮಸ್ತಕ ಭುಂಜಿಸುವಾ ||7||
ಒಂದೊಂದು ಕಾಳಿಗೆ ಒಂದೊಂದು ಕುಲಗೋತ್ರ
ಮುಂದೆ ಉತ್ತಮ ದೇಹದಲಿ
ಬಂದು ಸುe್ಞÁನದಿಂದಲೆ ಲೋಲಾಡುವರು ||8||
ಹಲವು ಪೇಳುವದೇನು ಸುಲಭಾವೆನ್ನು ಧರ್ಮ
ಅಳಿದು ಹೋಗುವದಲ್ಲ್ಲ ಇದನು ವಿಜಯವಿಠ್ಠಲ
ಬಲ್ಲ ಮಹಾಫಲವ||9||