ಯಾತರವನೆಂದುಸುರಲಿ

ಯಾತರವನೆಂದುಸುರಲಿ – ಜಗನ್ನಾಥ ಮಾಡಿದ ಒಂದು ನರರೂಪವಯ್ಯ

ಮುಟ್ಟು ಹುಟ್ಟಿನೊಳು ನೆಟ್ಟನೆ ನಾ ಬಂದೆತೊಟ್ಟಿದ್ದೆನಾಗ ತೊಗಲಬಕ್ಕಣಇಷ್ಟರೊಳಗೆ ಒಂದು ವಿವರವರಿಯದಂಥಭ್ರಷ್ಟಗೆ ನನಗಿನ್ಯಾತರ ಕುಲವಯ್ಯ ||1||

ಇಂದ್ರಿಯ ಸೂತಕ ದುರ್ಗಂಧದ ಮಲಮೂತ್ರನಿಂದ ಠಾವಲಿ ತನ್ನ ನಿಜವರಿಯದೆಬಂದದ್ದು ಬಚ್ಚಲ ಗುಣಿ ತಿಂದದ್ದು ಮೊಲೆ ಮಾಂಸ – ಇಂಥಅಂಧಕಗೆ ನನಗಿನ್ಯಾತರ ಕುಲವಯ್ಯ ||2||

ಒಂಬತ್ತು ಎಜ್ಜದೊಳೊಸರುವ ಹೊಲಸದುತುಂಬಿ ತುಳುಕುವ ಕೊಡವಾಗಿರಲುಇಂಬಿಲ್ಲದೆ ಹೊಲೆಗೊಂಡ ಠಾವಿನಲಿ ಬಂದಂಥಡಂಬಕ ನನಗಿನ್ಯಾತರ ಕುಲವಯ್ಯ||3||

ಕರುಳು ಖಂಡ ನಾರುವ ಚರ್ಮರೋಹಿತನರಪಂಜರದೀ ಹುರುಳಿಲ್ಲದನರದೇಹ ಹೊತ್ತು ತಿರುಗುವಂಥತಿರುಕ ನನಗಿನ್ಯಾತರ ಕುಲವಯ್ಯ ||4 ||

ಹಚ್ಚಡದ ಮೇಲೆ ಲಚ್ಚಿಕೆಯಿಟ್ಟಂತೆಹೆಚ್ಚು ಕಡಮೆ ಎಂದು ಹೆಣಗಾಡುತನಿಚ್ಚ ಕಾಗಿನೆಲೆಯಾದಿಕೇಶವನಹುಚ್ಚಗೆ ನನಗಿನ್ಯಾತರ ಕುಲವಯ್ಯ ||5||

Leave a Comment

Your email address will not be published. Required fields are marked *