ಯಾತಕೆ ದಯಮಾಡಲೊಲ್ಲೆ ರಂಗಯ್ಯ – ಜಗ
ನ್ನಾಥ ನಿನ್ನ ನಂಬಿದೆನಲ್ಲೊ ರಂಗಯ್ಯ
ಚಿಕ್ಕಂದು ಮೊದಲೆ ನಾನು ರಂಗಯ್ಯ – ನೀನೆದಿಕ್ಕೆಂದು ನಂಬಿದೆನೊ ರಂಗಯ್ಯ||1||
ನೆಂಟರಿಷ್ಟರು ನೀನೆ ರಂಗಯ್ಯ – ನೀನೆಬಂಟರಿಗೆ ಬಂಟನಯ್ಯ ರಂಗಯ್ಯ||2||
ದಾಸರ ದಾಸನಯ್ಯ ರಂಗಯ್ಯ – ಕರ್ಮಪಾಶಗಳ ಮೋಚನೆ ಮಾಡೊ ರಂಗಯ್ಯ||3||
ಶೇಷಗಿರಿ ವಾಸ ರಂಗಯ್ಯ – ಆದಿಕೇಶವನೆ ರಕ್ಷಿಸೊ ರಂಗಯ್ಯ||4||