ಯಾಕೆಲೊ ರಂಗ ನಿನಗಿಂತು ನಟನೆಯ ಮಾತು

ಯಾಕೆಲೊ ರಂಗ ನಿನಗಿಂತು ನಟನೆಯ ಮಾತು
ಮಾಕಾಂತ ಕರೆಸಿದರೆ ಬಾರದಿಹ ಪೊಗರು

ಗೊಲ್ಲತನವಂ ಬಿಡಿಸಿ ಗೋಗಾವ ಡಿಂಬ್ಹರಿಸಿಉಳ್ಳ ತಸ್ಕರ ಬುದ್ಧಿ ಕಡೆಗೆ ಇರಿಸಿಬಾಲಕನ ವಂದರಿಸಿ ಬಹುಭಾಗ್ಯವಂತನೆನಿಸಿಎಲ್ಲರೊಳು ಸಲಿಗೆ ನಿಲಿಸಿದಳೊ ನಿಮ್ಮರಸಿ ||1||

ಕೆಸರ ಚೊಗೆಯಂ ಬಿಡಿಸಿ ಗುಂಜ ಸರವಂ ತೆಗೆಸಿಬಿಸರುಹ ಮಣಿಮಾಲೆ ಕಡೆಗೆ ಇಡಿಸಿಪೊಸ ಪೀತಾಂಬರ ಉಡಿಸಿ ನವರತ್ನವಂ ತೊಡಿಸಿವಸುಧೆಯೊಳು ಮಿಗಿಲಾಗಿ ನಿಲಿಸಿದಳೊ ನಮಿಸಿ ||2||

ಎನ್ನ ಮಾತನು ಕೇಳು ಮುನಿಸು ಕೃತ್ಯವ ಸೀಳುಇನ್ಯಾಕೆ ಯೋಚನೆ ಫಲವ ಪೇಳುಬಿನ್ನಹವನು ಕೇಳು ನೆರೆಗೂಡಿ ಸುಖಬಾಳುಚೆನ್ನ ಬಾಡದಾದಿಕೇಶವ ದಯಾಳು ||3||

Leave a Comment

Your email address will not be published. Required fields are marked *