ಮುಟ್ಟದಿರೊ ಎನ್ನನು – ರಂಗಯ್ಯಮುಟ್ಟದಿರೊ ಎನ್ನನು
ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ
ಅತ್ತೆಯೊಬ್ಬಳ ಕೂಡ ಆಡಿ ಬರುವುದ ಕಂಡೆಸತ್ಯವ ಮಾಡದಿರೊ – ಹೇ ಸರಿನಂಟ ನೂರೆಂಟ ಬಣ್ಣದ ಬಂಟ ಬಿಡು ಎನ್ನ ಗಂಟ ||1||
ಹಡೆದವರ ತಲೆಗೆ ಮರಳು ಚೆಲ್ಲಿದಂತೆಮಡದೇರ ಕೂಡ್ಯಾಡಿ – ಕಲಿತ್ಯೆಲ್ಲೊ ಮಿರುಗ ದಿಮ್ಮದಿರುಗ ಸೊಕ್ಕಿಮುರುಗ ಬಿಡು ಎನ್ನ ಸೆರಗ ||2||
ಅಂಗೈಯ ನೊರೆಹಾಲು ಮುಂಗೈಯ ಮೇಲುಗಡೆಸಿಂಗಾರವಾದುದ – ಕಂಡೆ ಕಲೆಯ ಕಾಗಿನೆಲೆಯ ಬಟ್ಟಮೊಲೆಯ ಕನಕಯ್ಯನಿಗೊಲೆಯ ||3||