ಮಾವನ ಮನೆಯೊಳಗೆ ಇರಬಹುದೆ ಕೋವಿದರು

ಮಾವನ ಮನೆಯೊಳಗೆ ಇರಬಹುದೆ ಕೋವಿದರು

ಹಾವು ಹಿಡಿಯಲು ಬಹುದು ಹರಣ ನೀಡಲು ಬಹುದುಬೇವ ಕಿಚ್ಚನು ಹಿಡಿದು ನುಂಗಬಹುದುಭಾವೆಯಳ ತಂದೆ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ||1||

ಪರರ ಸೇರಲು ಬಹುದು ಪತಿತರಲ್ಲಿರಬಹುದುಕೊರಳ ಘಾತಕಂಗೆ ಶಿರ ಒಪ್ಪಿಸಬಹುದುತರುಣಿಯಳ ತೌರು ಮನೆಯಲಿ ಇರುವುದಕಿಂತತರುಗಿರಿ ಗುಹೆಯಲ್ಲಿ ಇದ್ದು ಜೀವಿಸಬಹುದು ||2||

ಮಾವ ಅತ್ತೆಯು ನೊಂದು ಅತ್ತಿಗೆಯು ತಾ ಜರಿದುಹೇವವನಿಕ್ಕಿ ಚೂರ್ಣವ ಮಾಡಲುಆವಾಗ ನೋಡಿದರು ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು ||3||

ಬಂದೊಂದು ತಿಂಗಳೊಳು ಬಹುಮಾನ ನಡತೆಗಳುಬಂದೆರಡು ತಿಂಗಳೊಳಗೆ ಹಿತವಾದವುಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟುವುವುಸಂದೇಹವೇಕೆ ಸಂಸಾರಿಗಳಿಗೆ||4||

ಈ ಪರಿಯಲುಂಬಂಥ ಅಳಿಯ ಭೋಜನಕಿಂತಗೋಪಾಳ ಲೇಸು ಅಭಿಮಾನಿಗಳಿಗೆಶ್ರೀಪತಿ ನೆಲೆಯಾದಿಕೇಶವನ ಚರಣ ಸ-ಮೀಪದಲಿ ವಾಸಿಪುದೆ ವಾಸಿ ಮನವೆ ||5||

* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.

Leave a Comment

Your email address will not be published. Required fields are marked *