ಮಾನವ ಸಂತಾನದೆಡೆಗೆ

ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು
ಅದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿವುದು ||

ಹುಟ್ಟಿದಂದಿನಿಂದ ನಾನು
ನಿನ್ನಾಣೆಯ ಮೀರಿದೆ
ಆದರೂ ನೀ ಅಕ್ಕರೆಯಲಿ
ತಾಯ್ತನವನೆ ತೋರಿದೆ|
ಮಧುರ ವಚನದಿಂದ ಮನವ
ಸಂತೈಸುತ ನಲಿಸಿದೆ
ಇದ ನೆನೆದರೆ ಕಂಬನಿಯೆ
ಕೋಡಿಯೊಡೆದು ಹರಿದಿದೆ||

ನಿನ್ನೊಲವಿನ ಹೊರೆಯ ಹೊತ್ತು
ನಾನು ಬಹಳ ಬಳಲಿದೆ
ಇನ್ನು ಮುಂದೆ ಹೊರಲಾರದೆ
ಎದೆಯು ನರಳಿ ಕೊರಗಿದೆ|
ನಿನ್ನೊಲವಿನ ಕರಸ್ಪರ್ಶದಿ
ಈ ನೋವನು ನೀಗಿಸು
ನಿನ್ಮ ಪಾದಪದ್ಮದಲಿ
ನನ್ನನಿರಿಸಿ ಪಾಲಿಸು||

—-ವಚನವೇದ

Leave a Comment

Your email address will not be published. Required fields are marked *