ಮರೆಯದೆ ನೆನೆ ಚಿನ್ಮಯನ

ಮರೆಯದೆ ನೆನೆ ಚಿನ್ಮಯನ ಹರಿನಾರಾಯಣ ಅಚ್ಯುತನ

ಮಗಳ ತಾನೆ ಮದುವೆಯಾದವನಮಗಳ ಮಗನ ಮೊಮ್ಮಗನಮಗಳ ಗಂಡನ ಮೇಲೆ ಮಲಗಿದ ಜಾಣನಮಗಳ ಮಾವನಿಗೆ ಮೈದುನನ||1||

ತಂದೆಗೆ ತಾನೆ ತಂದೆಯಾದವನ ತಂದೆಗೆ ತಾಯಿಯ ತಂದವನತಂದೆಗೆ ಪೂರ್ವದಿ ತಾ ಪುಟ್ಟಿಹನತಂದೆಗೆ ತಂದೆಗೆ ತಂದೆಯಹನ ||2||

ರಾಮನ ಸಮರೋದ್ಧಾಮನ ಸುಗುಣಾಭಿರಾಮನ ಸೀತಾನಾಯಕನರಾಮನ ಪೆತ್ತನ ಕಮಲದಳಾಕ್ಷನಪ್ರೇಮದಿ ನೆಲೆಯಾದಿಕೇಶವನ||3||

Leave a Comment

Your email address will not be published. Required fields are marked *