ಮರೆಯದಿರು ಮರೆಯದಿರು ಎಲೆ ಮಾನವ

ಮರೆಯದಿರು ಮರೆಯದಿರು ಎಲೆ ಮಾನವ
ಗರುವವೇತಕೆ ನಿನಗೆ ಎಲೆ ಮಂಕು ಜೀವ

ರೂಪದಲಿ ಮನ್ಮಥನೆ ಶಾಪದಲಿ ಗೌತಮನೆಕೋಪದಲಿ ದೂರ್ವಾಸ ಮುನಿಯೆ ನೀನುತಪದಲ್ಲಿ ವ್ಯಾಸನೆ ಕೃಪೆಯಲ್ಲಿ ಬಲೀಂದ್ರನೆನಿಪುಣತ್ವದಲಿ ನಾರದ ಮುನಿಯೆ ನೀನು ||1||

ಯತಿಯಲ್ಲಿ ಅಗಸ್ತ್ಯನೆ ಕ್ಷಿತಿಪರಲಿ ಜನಮೇಜಯನೆಗೀತದಲಿ ಗಂಧರ್ವನೇ ನೀನುವ್ರತದಲ್ಲಿ ಲಕ್ಷ್ಮಣನೆ ಮತಿಯಲ್ಲಿ ಕಶ್ಯಪನೆವಿತರಣ ಗುಣದಲಿ ಯಮಧರ್ಮನೆ ನೀನು ||2||

ನ್ಯಾಯದಲಿ ಭರತನೆ ಉಪಾಯದಲಿ ಕೃಷ್ಣನೇಕಾಯಶುದ್ಧಿಯಲಿ ಅಂಬರೀಷನೆ ನೀನುಮಾಯದಲಿ ಕಾವ್ಯನೇ ದಾಯದಲಿ ಶಕುನಿಯೇನೀ ಯಾರ ಹೋಲುವೆ ಎಲೆ ಮಾನವ ||3||

ಕೊಡುವುದಕೆ ಕರ್ಣನೆ ನಡತೆಯಲಿ ಧರ್ಮಜನೆದೃಢ ಮನಸಿನಲಿ ರುಕ್ಮಾಂಗದನೆ ನೀನುಪಡೆಯಲ್ಲಿ ಕೌರವನೆ ನುಡಿಯಲ್ಲಿ ಗಾಂಗೇಯನೆಮಡದಿಯರ ಭೋಗಕ್ಕೆ ಸುರಪತಿಯೆ ನೀನು||4||

ಬಾಣದಲಿ ರಾಮನೇ ತ್ರಾಣದಲಿ ಭೀಮನೇಕೇಣದಲಿ ಶಿಶಪಾಲನೇನೊಗುಣದಲಿ ಸುಧರ್ಮನೇ ರಣದಲಿ ಶಲ್ಯನೆ ಆನುಗುಣ್ಯವಾದದಲಿ ನರಪತಿಯೆ ನೀನು||5|||

ಛಲದಲ್ಲಿ ರಾವಣನೆ ಬಲದಲ್ಲಿ ವಾಲಿಯೇನಿಲುಗಡೆಯ ಮನದಲ್ಲಿ ದ್ರೋಣನೆ ನೀನುಕುಲದಲಿ ವಸಿಷ್ಠನೇ ಗೆಲುವಿನಲಿ ಪಾರ್ಥನೇಬಿಲುವಿದ್ಯೆಯಲಿ ಪರಶುರಾಮನೆ ನೀನು ||6||

ಶಕ್ತಿಯಲಿ ಹನುಮನೇ ಭಕ್ತಿಯಲಿ ವಿಭೀಷಣನೆಕೀರ್ತಿಯಲಿ ಹರಿಶ್ಚಂದ್ರರಾಯನೆ ನೀನುಅರ್ತಿಯಲಿ ಶುಕಮುನಿಯೆ ಸ್ಫೂರ್ತಿಯಲಿ ಸೂರ್ಯನೇಮುಕ್ತಿ ಸಾಧನಕೆ ಪ್ರಹ್ಲಾದನೆ ನೀನು||7||

ಗೋತ್ರದಲಿ ಬ್ರಹ್ಮನೇ ಸೂತ್ರದಲಿ ಕೌಶಿಕನೆಪಾತ್ರದಲಿ ವಾಲ್ಮೀಕಿ ಋಷಿಯೆ ನೀನುಮಾತಿನಲಿ ಗುರುಸುತನೆ ಜ್ಯೋತಿಯಲಿ ಬೃಹಸ್ಪತಿಯೆನೀತಿಮಾರ್ಗದಲಿ ಸಹದೇವನೇ ನೀನು ||8||

ಅಂಗದಲಿ ಅಜಮಿಳನೆ ಶೃಂಗದಲಿ ಮಾರುತನೆಕಂಗೊಳಿಪ ತನದಲ್ಲಿ ಕಾಮಸುತನೆಗಂಗೆಯನು ಪಡೆದಂಥ ನೆಲೆಯಾದಿಕೇಶವನಹಿಂಗದೆ ಭಜಿಸಿ ಪಾವನನಾಗು ಮನುಜ ||9||

Leave a Comment

Your email address will not be published. Required fields are marked *