ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ – ಇದರಕುರುಹ ಪೇಳಿ ಕುಳಿತಿರುವ ಜನರು
ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲಗಂಟಲು ಮೂರುಂಟು ಮೂಗು ಇಲ್ಲಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು ||1||
ನಡುವೆ ಕಲಿಯುಂಬುವುದು ನಡುನೆತ್ತಿಲಿ ಬಾಯಿಕಡು ಸ್ವರಗಳಿಂದ ಗಾನ ಮಾಡುವುದುಅಡವಿಯಲಿ ಹುಟ್ಟುವುದು ಅಂಗವೆರಡಾಗುವುದುಬಡತನ ಬಂದರೆ ಬಹಳ ರಕ್ಷಿಪುದು ||2||
ಕಂಜವದನೆಯರ ಕರದಲ್ಲಿ ನಲಿದಾಡುವುದುಎಂಜಲನುಣಿಸುವುದು ಮೂಜಗಕೆರಂಜಿಪ ಶಿಖಾಮಣಿ ಸಿಂಹಾಸನದ ಮೇಲಿರ್ಪಸಂಜೀವ ಪಿತ ಆದಿಕೇಶವನೆ ಬಲ್ಲ ||3||