ಮನವೆಂಬ ಮರ್ಕಟನು

ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ
ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ
ವಿಷಯಂಗಳೆಂಬ ಫಲಂಗಳ ಗ್ರಹಿಸಿ
ಭವದತ್ತ ಮುಖವಾಗಿ ಹೋಗುತಿದೆ ನೋಡಾ||

(ಈ) ಮನವೆಂಬ ಮರ್ಕಟನ
(ನಿಮ್ಮ) ನೆನಹೆಂಬ ಪಾಶದಿ ಕಟ್ಟೆ
ಎನ್ನನುಳಿಸಿಕೊಳ್ಳಯ್ಯ ಅಖಂಡೇಶ್ವರಾ||

—ಷಣ್ಮುಖಸ್ವಾಮಿ

Leave a Comment

Your email address will not be published. Required fields are marked *