ಮಣಿವೆ ನಿನ್ನ ಕಮಲದಡಿಗೆ
ದಯದಿ ಬಾರೊ ಎದೆಯ ಗುಡಿಗೆ||
ಭಕ್ತಹೃದಯಜಲಜ ಬಂಧು
ನೀನಪಾರ ಕರುಣೆ ಸಿಂಧು|
ಪ್ರೇಮಭಕ್ತಿಯೊಡನೆ ಕೂಡಿ
ಬಾರೈ ತಂದೆ ಕರೆವೆ ಬೇಡಿ||
ತ್ಯಾಗಮೂರ್ತಿ ತಪೋಮೂರ್ತಿ
ಜ್ಞಾನಮೂರ್ತಿ ಸೊಗದ ಮೂರ್ತಿ|
ಹರಿದಿದೆಲ್ಲೆಡೆ ನಿನ್ನ ಕೀರ್ತಿ
ತ್ಯಾಗಪಥದ ನಿತ್ಯಸ್ಪೂರ್ತಿ||
ವಿಶ್ವದೊಡೆಯ ಶುದ್ಧಹೃದಯ
ಕೋಟಿಸೂರ್ಯ ಜ್ಯೋತಿರೂಪ|
ನಿನ್ನೀ ಕಂದನ ಕರೆಯನಾಲಿಸಿ
ಬಾರೋ ಬೇಗ ಶಕ್ತಿವೆರಸಿ||
—ಸ್ವಾಮಿ ತದ್ರೂಪಾನಂದ