ಮಗುವ ತಡೆಯಬಾರದೆ ಮಾನಿನಿಯರು

ಮಗುವ ತಡೆಯಬಾರದೆ ಮಾನಿನಿಯರುಸುಗುಣ ಚೆನ್ನಿಗನೆಂಬ ಸೊಬಗುಳ್ಳ ಮಗುವ

ನೀರೊಳಗೆ ಪೊಕ್ಕು ತಾ ಬೀರುತಿದೆ ಮಾತುಗಳಧರಣಿಧರ ತಳಕಿಳಿದು ಬಾರದಿದೆಕೊಘೋರ ಪಾತಕವೆಂಬ ಬೇರ ಮೆಲ್ಲುತಲಿದೆಕೊಬಾರಯ್ಯ ಎನೆ ಕೋಪವೇರುತಿಹ ಮಗುವ ||1||

ಬೇಡುತಿದೆ ದಾನವನು ನೀಡುತಿದೆ ಪಾದವನುರೂಢಿಪಾಲರ ಕಂಡು ಕೊಲ್ಲುತಿದೆಕೊಓಡುತಿದೆ ಮೃಗದೊಡನೆ ಆಡುತಿದೆ ಕಪಿಗಳೊಳುನೋಡಲ್ಕರಿನಾಗರ ಹಾವ ತುಳಿಯುತಿದೆಕೊ ||2||

ಇತ್ತ ಬಾರೆಂದೆನಲು ಬತ್ತಲೆ ನಿಲ್ಲುತಿದೆಕೊಮತ್ತೆ ತೇಜಿಯನೇರಿ ನಲಿಯುತಿದೆಕೊಹತ್ತೆ ಬಂದವರಿಗೆ ಅರ್ತಿಯನು ನೀಡುತಿಹನಿತ್ಯ ವೈಕುಂಠದಲಿ ನಲಿವ ಮಗುವ ||3||

Leave a Comment

Your email address will not be published. Required fields are marked *