ಮಗುವಿನ ಮರುಳಿದು ಬಿಡದಲ್ಲ – ಈ
ಜಗದೊಳು ಪಂಡಿತರಿದ ಬಿಡಿಸಿ
ನೀರನು ಕಂಡರೆ ಮುಳುಗುತಿದೆ – ತನ್ನಮೋರೆಯ ತೋರದೆ ಆಡುತಿದೆಧಾರಿಣಿ ಹಲ್ಲಲಿ ಎಳೆಯುತಿದೆ – ದೊಡ್ಡಭೈರವಾಕಾರದಿ ಕೂಗುತಿದೆ ||1||
ಪೊಡವಿಯ ಕೊಟ್ಟಗೆ ಅಳೆಯುತಿದೆ – ತನ್ನಕೊಡಲಿಯೊಳು ಭೂಪರ ಕಡಿಯುತಿದೆಅಡವಿ ಕೋತಿಗಳ ಕೂಡುತಿದೆ – ಚೆಲ್ವಮಡದಿಯರನು ಹಿಡಿದೆಳೆಯುತಿದೆ ||2||
ಉಟ್ಟಿದ್ದ ವಸ್ತ್ರವ ಬಿಸುಡುತಿದೆ – ತನ್ನದಿಟ್ಟ ತೇಜಿಯನೇರಿ ನಲಿಯುತಿದೆಸೃಷ್ಟಿಯೊಳು ಭೂಸುರರ ಪೊರೆದ ಜಗಜಟ್ಟಿಯಾದಿಕೇಶವ ರಾಯನಂತೆ||3||