ಮಂಗಲಮಯ ಪ್ರಭು

ಮಂಗಲಮಯ ಪ್ರಭು ನೀನೆಂದರಿತಿಹೆ
ಕಂಗಳು ನಿನ್ನಯ ಪಾದದಿ ನೆಟ್ಟಿರೆ||

ಇರಿಸೈ ಸುಖದಲಿ ಇರಿಸು ದುಃಖದಲಿ
ಅರಿತಿಹೆ ಭಯವಿನಿತಿಲ್ಲವು ಎನಗೆ||

ಏನನು ಗೈದರು ಕೈಬಿಡೆಯೆಂಬುವ
ಎನಗೆ ನೀಡು ನೀ ಭರವಸೆಯ||

ಪ್ರಭುವೇ ದೇವನೆ
ಬಾ ಮಮ ಹೃದಯಕೆ
ಶುಭವನು ಕೋರುತ
ಬೇಡುತಲಿರುವೆ||

—-ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *