ಭಾವ ಬೀಸರವಾಯಿತ್ತು, ಮನ ಮೃತ್ಯುವನಪ್ಪಿತ್ತು ;

ಭಾವ ಬೀಸರವಾಯಿತ್ತು, ಮನ ಮೃತ್ಯುವನಪ್ಪಿತ್ತು ;
ಆನೇವೆನಯ್ಯಾ ?
ಆಳಿತನದ ಮನ ತಲೆಕೆಳಗಾಯಿತ್ತು ;
ಆನೇವೆನಯ್ಯಾ ?
ಬಿಚ್ಚಿ ಬೇರಾಗದ ಭಾವವಾಗೆ,
ಬೆರೆದೊಪ್ಪಚ್ಚಿ ನಿನ್ನ ನಿತ್ಯಸುಖದೊಳಗೆಂದಿಪ್ಪೆನಯ್ಯಾ, ಚೆನ್ನಮಲ್ಲಿಕಾರ್ಜುನಾ ?

Leave a Comment

Your email address will not be published. Required fields are marked *