ಭಜಿಸಿದ್ಯಾ ಈ ಭಾಗ್ಯನಿಧಿಯಾ

ಭಜಿಸಿದ್ಯಾ ಈ ಭಾಗ್ಯನಿಧಿಯಾ
ಭಜಿಸಿದ್ಯಾ ಈ ಭಾಗ್ಯನಿಧಿಯಾ ನೋಡು
ತ್ರಿಜಗವಂದಿತ ಗುಣಾಂಬುಧಿಯಾ ಹಾಹಾ
ಸುಜನರ ಹೃದಯ ಪಂ
ಕಜ ಕರ್ಣಿಕೆವಾಸಾ ಅಜಸುರಾರ್ಚಿತ ಪಾದಾ
ರಜತಮೋ ದೂರನ್ನ

ಮಣಿಮಯ ಖಚಿತ ಕಿರೀಟ ಚಂದ್ರ
ಮನ ಸೋಲಿಸುವ ಲಲಾಟ
ಸಣ್ಣ ಫಣಿ ಕಸ್ತೂರಿ ನಾಮಾ ಮಾಟಾ
ನಮ್ಮನು ನೋಡುವ ವಾರೆ ನೋಟಾ ಹಾಹಾ
ಕನಕ ಮಕರ ಮೋಹನ ಕುಂಡಲ ಕರ್ಣ
ಮಿನುಗುವ ಕದಪು ಆವಿನ ಸೋಲಿಸೆ ನಿತ್ಯಾ ||1||

ಭೃಂಗ ಕುಂತಳ ಕೇಶಾ ಪುಬ್ಬು ಅಂಗಜ ಚಾಪಾ ವಿಲಾಸ ಉ
ತ್ತುಂಗ ಚಂಪಕ ಕೋಶಾ ನಾಸಾರಸಾ
ರಂಗುದುಟಿಯ ಮಂದಹಾಸಾ ಹಾಹಾ ತಿಂಗಳ ಎಳೆ ಬೆಳ
ದಿಂಗಳಾ ಮೀರೆ ಭೂ ಮಂಗಳಾಕೃತಿ ತಿರುವೆಂಗಳ ಸ್ವಾಮಿಯ ||2||

ಪರಿಮಳ ವೀಳ್ಯೆ ಕರ್ಪುರಾ ವಿಟ್ಟಾ
ಕರಿಡಿಗೆ ಬಾಯ ಮಧುರಾ ವಾಣಿ
ಸ್ವರನಾದಾ ಜಲಧಿ ಗಂಭೀರಾ ದಂತ
ಪರಿಪಙË್ತ ಸಮ ವಿಸ್ತಾರ ಹಾಹಾ ಮಿರುಗುವಾನಂತ ಚಂ
ದಿರ ತೇಜಾಧಿಕ ಮುಖಾ ಪರಿಪರಿ ವೇದಾವು
ಚರಿಸುವ ಚತುರನ್ನ ||3||

ಬಕುಳಾರವಿಂದ ಮಲ್ಲಿಗೆ ಕುರುವಂಕ
ಪನ್ನೇರು ಸಂಪಿಗೆ ಪೊಂಗೇ
ತಕಿ ಮರುಗ ಶಾವಂತಿಗೆ ಭೂ ಚಂಪಕೆ
ಜಾಜಿ ಇರುವಂತಿಗೆ | ಹಾಹಾ |
ಸಕಲವು ತುರುಬಿರೆ ಮುಕುಳಿತಾ ವಿಕಸಿತಾ
ಮಕರಂದಾ ಮಾರಂದೋದಕ ಸುರಿಯಲಿಂದು||4||

ಕಡಗ ಕಂಕಣ ಮುದ್ರೆ ಬೆರಳಾ ಪಾಣಿ
ನಿಡಿದೋಳು ಕಕುಭುಜಾ ಕೊರಳಾ ಸ್ಕಂಧಾ
ಪಡಿಸಪ್ತ ಪರ್ಣಾದಿ ಸರಳಾ ಬೆನ್ನು
ಮುಡಿಯಲಿಟ್ಟಾ ಮಣಿ ಹರಳಾ | ಹಾಹಾ|
ಜಡಿತದ ಪವಿ ಅಳವಡಿಸಿದ ಕೇಯೂರ
ಒಡನೆ ತಾಯಿತ ಕೀರ್ತಿ ವಡಿವೇಲಿ ಮೆರೆವನ್ನ ||5||

ಕರತಳ ರೇಖೋಪರೇಖಾ ಕಾಂತಿ ಅರುಣ
ಸುರವಿ ಮಯೂಖಾ
ಬೇರೆ ಪರಿಶೋಭಿಸುವ ಹಸ್ತಶಾಖಾ
ಮೇಲು ಧರಿಸಿದ ಚಕ್ರಾದಿ ಶಂಖಾ | ಹಾಹಾ |
ಸರಿಗೆ ಕೌಸ್ತುಭ ಮಣಿ ಸಿರಿವತ್ಸ ವನಮಾಲಾ
ಉರವೈಜಯಂತಿ ಮಂದಾರ ಹೀರ ಹಾರನ್ನ||6||

ಮುತ್ತು ವೈಢೂರ್ಯ ಪ್ರವಳಾ ಪಚ್ಚ್ಚೆ ಕೆತ್ತಿದ ಪದಕ ನ್ಯಾವಳಾ
ಸುತ್ತಸುತ್ತಿದ ಸನ್ನುಡಿವಾಳಾ ಈತಾ
ಸ್ತುತಿಪ ಜನಕೆ ಜೀವಾಳಾ | ಹಾಹಾ |
ಪ್ರತ್ಯೇಕವಾಗಿ ತೂಗುತಿಹ ಸರಗಳು
ತತ್ತುಲಸಿಧಾಮ ಚಿತ್ರವಾಗಿರೆ ಬಲು ||7||

ಪುಣುಗು ಕೇಶರಗಂಬೂರ ಗೋರೋ
ಚನ ನಖ ಚಂದನಾ ಅಗರಾ ಪಚ್ಚೆ
ತೆನೆ ಮೃಗನಾಭಿ ಪನ್ನೀರಾ ವ್ಯಾಳಾ
ಘನ ಪರಿಮಳ ಗಂಧ ಸಾರಾ | ಹಾಹಾ |
ತನುವಿಗೆ ತನುವು ಲೇಪನವಾದಾ ಸೊಗಸು ವಾ
ಸನೆ ಸುತ್ತ ಘಮಘಮ ತನರು ಹಾವಳಿ ತಿಳಿ ||8||

ತ್ರಿವಳಿ ಉಪಗೂಢ ಜಠರಾ ಅಖಿಳಾವನಿ ಧರಿಸಿದ ಧೀರಾ ನಾಭಿ
ಸುವರ್ಣ ಕುಸುಮ ಮಂಜೀರಾ
ಮೃಗ ದೇವ ಉಡಿ ಉಡದಾರಾ | ಹಾಹಾ |
ಭವಕಿಂಕಿಣಿ ತಳಲಾವಿ ವಸನ ಬಿರು
ದಾವಳಿ ತೊಡರು ದೈತ್ಯಾವಳಿ ಹರನನ್ನಾ ||9||

ಊರು ಜಾನು ಜಂಘೆ ಗುಲ್ಫಾ ವಿಚಾರಿಸೆ ಕ್ರಮಾತು ಅಲ್ಪಾ ತನ್ನ
ತೋರುವ ಜನರಿಗೆ ಅಲ್ಪಾ ಗುಣ ಸಾರಮಾಡಿಪ್ಪ
ಸಂಕಲ್ಪಾ | ಹಾಹಾ|
ವಾರಣಾ ಕರದಂತೆ ಹಾರೈಸುಯಿಂತು ನೂ
ಪುರ ಕಡಗ ಗೆಜ್ಜೆ ಚಾರು ಚರಣ ಪೆಂಡೆ||10||

ಮೃದುದಳಾಂಗಲ ನಖ ಭಾಸಾ ರಕ್ತ ಪದತಳಧ್ವಜ
ವಜ್ರಾಂಕುಶ ಚಕ್ರ
ಪದುಮಾದಿ ಚಿಹ್ನ ನಿರ್ದೋಷÀ
ಸುಧಿಯಾ ಸುರಿವ ಪೀಠ ಸರಸಾ | ಹಾಹಾ |
ತ್ರಿದಶನಾಯಕ ಶಿವ ವಿಧಿಗಳ ಮುಕುಟ
ಪಾದದಲಿ ಸಮ್ಮರ್ದವಾದುದು ನೋಡಿ ತರುವಾಯಾ ||11||

ಭಾನು ಶಶಿವರ್ಣ ಪಾದಾ ಪಾಪಕಾನನ
ದಹಿಸುವ ಪಾದಾ ಕಾಮ
ಧೇನು ಚಿಂತಾಮಣಿ ಪಾದಾ ಬಲು
ಕಾನನ ದಹಿಸುವ ಪಾದಾ | ಹಾಹಾ |
ಅನಂತ ದಿನಕ್ಕೊಮ್ಮೆ ನೀನೇ ಗತಿಯೆಂದಾ
ಮಾನವಗೆ ಬಂದು ಕಾಣಿಸಿಕೊಂಬನ್ನ||12||

ಅಪದಕ್ಷ ಸಾರಾಧ್ಯಕ್ಷ ಸರ್ವವ್ಯಾಪಕ ಕರುಣಿಕಟಾಕ್ಷ ಜಾಗ್ರತ್
ಸ್ವಪ್ನದಲ್ಲಿ ಪ್ರಾe್ಞÁದಕ್ಷ ನಿಜ ಆಪನ್ನರಿಗೆ ದಾವಾ ವೃಕ್ಷ | ಹಾಹಾ |
ರೂಪ ರೂಪಾಂತರ ವ್ಯಾಪಾರ ಮಾಳ್ಪನ್ನ
ಆಪಾದ ರತುನ ಮೌಳಿಪರಿಯಂತರಾ||13||

ಹಿಂದಣ ಅನುಭವ ಧ್ಯಾನಾ ವೇಗ ತಂದು
ಸಂಪಾದಿಸು ಜ್ಞಾನಾ ಭಕ್ತಿ
ಯಿಂದ ಮುಂದಕೆ ನಿದಾನಾ ಚಿತ್ತಯಿಂದಾ
ಕೊಂಡಾಡು ಮುನ್ನಿನಾ | ಹಾಹಾ |
ಬಂಧನ ಹರಿಸಿ ಆನಂದವ ಕೊಡುವ ಮು
ಕುಂದ ಅನಿಮಿತ್ತ ಬಂಧು ವೆಂಕಟನ್ನ ||14||

ಭುಜಗಾದ್ರಿನಿಲಯಾ ಗೋಪಾಲಾ ನಿತ್ಯ
ಭಜಿಸುವ ಜನರಿಗೆ ಶೀಲಾ ಪುಣ್ಯ
ವ್ರಜ ಪಾಲಿಸುವ ವಿಶಾಲಾ ಇತ್ತು
ನಿಜರೊಳಗಿಡುವ ಈ ಕೂಲಾ | ಹಾಹಾ |
ವ್ರಜದಲಿ ಪುಟ್ಟಿದಾ ಸುಜನಾಂಬುಧಿ ಸೋಮ
ವಿಜಯವಿಠ್ಠಲರೇಯಾ ಗಜರಾಜವರದನ್ನಾ ||15||

Leave a Comment

Your email address will not be published. Required fields are marked *