ಭಕುತಿ ಸುಖವೊ ರಂಗ

ಭಕುತಿ ಸುಖವೊ ರಂಗ ಮುಕುತಿ ಸುಖವೊ
ಭಕುತಿ ಸುಖವೊ ಮುಕುತಿ ಸುಖವೊ |
ಯುಕುತಿವಂತರೆಲ್ಲ ಹೇಳಿ

ಭಕುತಿ ಮಾಡಿದ ಪ್ರಹ್ಲಾದ |
ಮುಕುತಿಯನ್ನು ಪಡೆದುಕೊಂಡ |
ಮುಕುತಿ ಬೇಡಿದ ಧ್ರುವರಾಯ |
ಯುಕುತಿಯಿಂದ ಹರಿಯ ಕಂಡ ||1||

ಭಕುತಿ ಮಾಡಿದ ಅಜಮಿಳನು |
ಅಂತ್ಯದಲಿ ಹರಿಯ ಕಂಡ |
ಮುಕುತಿ ಬೇಡಿದ ಕರಿರಾಜ |
ದುರಿತಗಳನು ಕಳೆದುಕೊಂಡ ||2||

ಭಕುತಿ ಮುಕುತಿದಾತ ನಮ್ಮ |
ಲಕುಮಿಯರಸ ವಿಜಯವಿಠ್ಠಲ ||
ಶಕುತನೆನುತ ತಿಳಿದು ನಿತ್ಯ |
ಭಕುತಿಯಿಂದ ಭಜನೆ ಮಾಡಿರೊ ||3||

Leave a Comment

Your email address will not be published. Required fields are marked *