ಬ್ರಹ್ಮ ಲಿಖಿತವ ಮೀರಿ ಬಾಳ್ವರುಂಟುನಿರ್ಮಳದಿ ವೈಷ್ಣವರ ಮನಮುಟ್ಟಿ ಭಜಿಸಿ
ಪಾಪಕೆ ಹೇಸದ ಶಬರ ಬಟ್ಟೆಯನು ಕಾದಿರಲುಆ ಪಥದಿ ಸಲೆ ವೈಷ್ಣವನು ಬಂದುಪಾಪವನು ತಪ್ಪಿಸಿ ರಾಮನಾಮವ ಕೊಡಲುಕಾಪಥಕ ವಾಲ್ಮೀಕಿ ಮುನಿಯಾಗಲಿಲ್ಲವೆ ? ||1||
ಪಂಚಮಹಾಪಾತಕವ ಮಾಡಿದ ಅಜಾಮಿಳನವಂಚಿಸಿ ಯಮದೂತರೆಳೆದೊಯ್ಯುತಿರಲುಕಿಂಚಿತ್ತು ಹರಿನಾಮವನಾಕಸ್ಮಿಕದಿ ನೆನೆಯೆಅಂಚಿಗೆಳೆದೊಯ್ದವರು ವಿಷ್ಣುದೂತರಲ್ಲವೆ ?||2||
ಬಾಲಕ ತನ್ನ ತಾಯ್ತಂದೆಯೊಳ್ ಮುನಿದು ಹಲವುಕಾಲ ವನದೊಳು ತಪವ ಮಾಡಲುನೀಲಮೇಘಶ್ಯಾಮ ಮೆಚ್ಚಿ ಬಾಲಕನಿಗೆಮೇಲಾದ ಪದವಿಯನು ಕೊಡಲಿಲ್ಲವೆ ? ||3||
ದಶಕಂಠನನುಜನು ಜಾನಕಿಯ ಬಿಡ ಹೇಳೆಅಸುರ ಕೋಪವ ತಾಳಿ ಹೊರಗಟ್ಟಿದಾಗಪೆಸರಗೊಳುತ ಬಂದು ಮೊರೆಹೊಕ್ಕ ವಿಭೀಷಣಗೆಶಶಿರವಿ ಪರ್ಯಂತ ಪಟ್ಟಗಟ್ಟಲಿಲ್ಲವೆ ? ||4||
ಕಲಿಗೆ ಬೆದರುವರಲ್ಲ ಕಾಲನ ಬಾಧೆಗಳಿಲ್ಲಛಲದಿ ನರಳಿ ಪುಟ್ಟುವ ಗಸಣೆಯಿಲ್ಲಒಲಿದು ಕಾಗಿನೆಲೆಯಾದಿಕೇಶವರಾಯನಸಲೆ ನಂಬಿದವರಿಗೆ ಮುಕುತಿಯಿತ್ತುದಿಲ್ಲವೆ ?||5||