ಬೆರಸುವಡೆ ಬೇಗ ತೋರಾ,

ಬೆರಸುವಡೆ ಬೇಗ ತೋರಾ,
ಹೊರ ಹಾಯ್ಕದಿರಯ್ಯಾ.
ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು ;
ಎನ್ನ ಹೊರ ಹಾಯ್ಕದಿರಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ನಂಬಿ ಬೆಂಬಳಿಬಂದೆನು ಇಂಬುಗೊಳ್ಳಯ್ಯಾ ಬೇಗದಲಿ.

Leave a Comment

Your email address will not be published. Required fields are marked *