ಬೆಟ್ಟದಂಥ ದುರಿತವು

ಬೆಟ್ಟದಂಥ ದುರಿತವು ಸುತ್ತಮುತ್ತಲೊಟ್ಟಿರೆ
ಕೃಷ್ಣನಾಮದ ಕಿಡಿಬಿದ್ದು ಬೆಂದುಹೋದುದ ಕಂಡೆನಯ್ಯ||

ಎಲೆ ಎಲೆ ದುರಿತವೆ ತಿರುಗಿ ನೋಡದೆ ಹೋಗು
ಎಲೆ ಎಲೆ ದುರಿತವೆ ಮರಳಿ ನೋಡದೆ ಹೋಗು
ನಿನ್ನ ಕಂಡರೆ ಕೃಷ್ಣ ಶಿಕ್ಷಿಸದೆ ಬಿಡನು
ಇನ್ನೊಮ್ಮೆ ಕಂಡರೆ ಶಿರವ ಚೆಂಡಾಡುವನು
ಪುಂಡರೀಕಾಕ್ಷ ನಮ್ಮ ಪುರಂದರವಿಟ್ಠಲ||

                                              —-ಪುರಂದರದಾಸ

Leave a Comment

Your email address will not be published. Required fields are marked *