ಬುದ್ಧ ಚಂದ್ರೋದಯದಿ

ಬುದ್ಧಚಂದ್ರೋದಯದಿ
ಹಿಗ್ಗಿ ನಮ್ಮೆದೆ ಕಡಲು
ಶಾಂತಿ ಶೀಕರವನಿದೋ ಚಿಲ್ಲುತಿಹುದು
ಜಗವ ಗೆಲ್ಲುತಿಹುದು||

ನೂರು ಸಾಸಿರ ದಳದ
ಬುದ್ಧಪದ್ಮವು ಅರಳೆ
ಭಕುತಭೃಂಗವು ಬಂದು ಮುತ್ತುತಿಹುದು
ಸುತ್ತ ಸುತ್ತುತಿಹುದು||

ಜ್ವಾಲೆ ಮೇಲುದ ಹೊದೆದು
ಅಗ್ನಿದೇವನೆ ನಡೆದು
ಕರ್ಮಕಾನನವನ್ನು ದಹಿಸಲೆಂದು
ನಡೆದು ಬರುವನಿಂದು||

                            —-ಪ್ರಭುಶಂಕರ

Leave a Comment

Your email address will not be published. Required fields are marked *