ಬಾಲಕನೆಂದೆತ್ತಿಕೊಂಡೆನೆ – ಗೋಪಾಲಕೃಷ್ಣನಬಾಲಕನೆಂದೆತ್ತಿಕೊಂಡೆನೆ
ಬಾಲಕನೆಂದೆತ್ತಿಕೊಂಡರೆ – ವಾರೆ ಮಾಡಿ ಮೋರೆ ನೋಡಿಶ್ರೀಲತಾಂಗಿಯರ ಲೋಲ – ಮಾರನಾಟವಾಡಿ ಪೋದನೆ
ಹೊತ್ತರೆದ್ದು ಮನೆಗೆ ಬಂದನೆ – ಯಶೋದೆ ಕೇಳೆ ಎತ್ತಿಕೊಂಡು ಮುತ್ತುಕೊಟ್ಟೆನೆಎತ್ತಿಕೊಂಡು ಮುತ್ತು ಕೊಟ್ಟರೆಮುತ್ತಿನ್ಹಾರ ಕೊರಳಿಗ್ಹಾಕಿಚಿತ್ತಜಾತ ಕೇಳಿಯಲ್ಲಿಬತ್ತಲೆ ನಿಂದೆತ್ತು ಎಂದನೆ||1||
ಗಂಡನಂತೆ ಮನೆಗೆ ಬಂದನೆ – ಯಶೋದೆ ಕೇಳೆಮಿಂಡನಂತೆ ಕಣ್ಣು ಹೊಡೆದನೆಪುಂಡಪೋಕರನ್ನು ಮೀರಿದುಂಡು ಕುಚಗಳನ್ನು ಪಿಡಿದುದಿಂಡುರುಳಿಸಿ ಒಂದುಸರಲಿಬಂಡನುಂಡು ಹಾರಿ ಪೋದನೆ ||2||
ಏಸು ಮೋಸ ಕಲಿತ ಜಾಣನೆ – ಯಶೋದೆ ಕೇಳೆವಾಸುದೇವ ಮಾಯಕಾರನೆಹಾಸುಮಂಚದ ಹಾಸುಗೆಯಲಿತೋಷದಿಂದ ಬಾಚಿ ಸೆಳೆದುಶೇಷನನ್ನು ಪೂಜಿಸೆಂದಶ್ರೀಶ ಬಾಡದಾದಿ ಕೇಶವ ||3||