ಬರಿದೆ ಕರೆಯೆ ನೀ ಬಾರದಿರುವೆ

ಬರಿದೆ ಕರೆಯೆ ನೀ ಬಾರದಿರುವೆ
ಪರಮ ಪ್ರೇಮದಿಂ ಕರೆದರೆ ಬರುವೆ||

ತಿಳಿತಿಳಿದು ನಿನ್ನ ಕರೆಯದೆ ಉಳಿದೆ
ಇಳೆಯ ಆಟದಲಿ ಮೈಮರೆತೆ|
ಕಳೆಯೈ ಮೋಹದ ಆವರಣವ ನೀ
ಬೆಳಕ ತೋರೊ ಹರಿ ಕರುಣಾಜಲಧೇ||

ಕನಕಹರಿಣವೀ ಭುವನ ವಿರಚನೆ
ಕನಸು ಸಾಕೋ ಕೃಷ್ಣ ಕೈಮುಗಿವೆ|
ದಿನಕರನುದಯಕೆ ವನಜವಿಕಸನ
ಮನವರಳಿಸೊ ಹರಿ ಪರಮಗುಣನಿಧೇ||

Leave a Comment

Your email address will not be published. Required fields are marked *