ಬಂಧುಗಳದಾರಿಗಾರಿದ್ದರೇನು – ಇಷ್ಟಬಂಧು ತ್ರೈಜಗಕೆ ಶ್ರೀಹರಿಯಲ್ಲದೆ – ಮಿಕ್ಕಬಂದುಗಳದಾರಿಗಾರಿದ್ದರೇನು
ನೆಗಳ ಕೈಯಲ್ಲಿ ಮಾತಂಗವು ಸಿಕ್ಕಿ ಒದರಲಾಗಿ – ಆನೆಗಳೇನ ಮಾಡುತಿರ್ದವಡವಿಯಲಿನಗಜೆಯಾಳ್ದನ ಬ್ರಹ್ಮೇತಿ ಬಂದು ಕಾಡಲಾಗಿ ರುದ್ರಾದಿಗಳೇನ ಮಾಡುತಿರ್ದರಾ ಶೈಲದೊಳಗೆ ||1||
ದಿಂಡೆಯ ಮಾರ್ಗದಿ ಮಲತಾಯಿ ಮಗನ ಹೊಡೆಯಲುಮಂಡಲ ಪತಿ ಏನ ಮಾಡುತಿರ್ದನುಮಿಂಡಿ ಪೆಣ್ಣನು ಸಭೆಯಲ್ಲಿ ಸೀರೆ ಸುಲಿಯಲುಗಂಡರೈವರು ನೋಡಿ ಏನ ಮಾಡುತಿರ್ದರಯ್ಯ ||2||
ಮೃಗಚಕ್ರವರ್ತಿ ಬಹುವರನಾಗಿ ಪೋಗುತ್ತಿರೆಮಿಗೆ ಸತಿಸುತರೇನ ಮಾಡುತಿರ್ದರುಮೃಗಮಾನವಾಕಾರ ಕಾಗಿನೆಲೆಯಾದಿಕೇಶವನಲ್ಲದೆಮಿಗು ಬಂಧುಗಳದಾರಿಗಾರಿದ್ದರೇನು ||3||