ಪ್ರಭುವೆನ್ನ ಅವಗುಣ ಮನದಿ ಧರಿಸದಿರು|
ವಿಭುವೇ ಸಮದರುಶನ ತವ ಸುಗುಣವು|
ಅಭಯವ ನೀಡುತ ಕೃಪೆಯಿಂ ಪಾಲಿಸು||
ಲೋಹದ ವಿಗ್ರಹ ಪೂಜೆಯಲಿರ್ಪುದು
ಲೋಹವದಲ್ತೆ ವ್ಯಾಧನ ಖಡ್ಗವು|
ಪರುಸಮಣಿಯದೋ ಭೇದವ ಕಾಣದು
ಎರಡನೂ ಸೋಂಕಲು ಕಾಂಚನವಾದುವು||
ನದಿಯೆಂದೆಂಬರು ನೀರೊಂದ
ಬದಿಯೆಂದೆಂಬಂರು ಮತ್ತೊಂದ|
ಗಂಗೆಯ ಸೇರಲು ಭರದಿಂದ
ಮಂಗಳವಾಗವೆ ಅದರಿಂದ||
ಬೇರೆಯೆ ಜೀವನು, ಬೇರೆಯೆ ಬ್ರಹ್ಮವು
ಸೂರದಾಸನದ ಒಪ್ಪುವುದಿಲ್ಲವು|
ಭೇದಕೆ ಮೂಲವು ಅಜ್ಞಾನವದು
ಭೇದವ ಕಾಣನು ಜ್ಞಾನಿಯು ಎಂದೂ||
—–ಸ್ವಾಮಿ ಹರ್ಷಾನಂದ