ಪೋಗದೋ ಛಳಿ ಪೋಗದೋ
ಹಳೆಯ ಹಚ್ಚಡ ಸಕಲಾತಿ ಚಿಮ್ಮುರಿ ಟೊಪ್ಪಿಗೆಬಿಳಿಯ ಕಂಬಳಿ ಪೊತ್ತರೆ ಪೋಗದೋನಳಿನಾಕ್ಷಿಯ ತನ್ನ ತೊಡೆಯ ಮೇಗಡೆ ಇಟ್ಟುಕಳಸ ಕುಚದ ಮೇಲೆ ಕೈಯಿಕ್ಕಿದಲ್ಲದೆ||1||
ಬಡನಡುವಿನ ಬಟ್ಟಕುಚದ ಕಾಮಿನಿರನ್ನೆಬೆಡಗಿನಲಿ ನಗುತ ನಲ್ಲನ ಬಳಿಗೆ ಬರಲುಒಡನೆಯೆ ಮೋಹದಿಂ ಪಿಡಿದೆತ್ತಿ ಲಲನೆಯನಡುಮಂಚದ ಮೇಲೆ ಕೆಡಹಿಕೊಂಡಲ್ಲದೆ||2||
ಛಳಿಗಾರದೆ ವಿಷ್ಣು ಛಳಿಗಾರದೆ ಶಿವಘಳಿಲನೆ ಗಂಗೆಯ ಬೀಸಾಡಲುಛಳಿಯ ಕಾರಣವೇನು ನೆಲೆಯಾದಿಕೇಶವತಿಳಿದು ನೀ ಹೇಳಯ್ಯ ಕಳಿಯ ವಿವರವನು ||3||