ಪಾಹಿ ಮದನಗೋಪಾಲ

ಪಾಹಿ ಮದನಗೋಪಾಲ|
ಮುಕುಂದ ಪಾಲಿತ ಮುಚುಕುಂದ||

ನಂದನಂದನ ನಂದಿತ ಮುನಿಜನ|
ಮಂದಹಾಸವದನ— ಹರೇ ಕೃಷ್ಣ||

ದಂಡಿತರಿಪುಜನ ಅಂಡಜವಾಹನ|
ಪುಂಡರೀಕನಯನ—ಹರೇ ಕೃಷ್ಣ||

ಪತಿತಪಾವನ ನತಜನಾವನ|
ಸತತಾನಂದಘನ—ಹರೇ ಕೃಷ್ಣ||

ಇಂದಿರಾರಮಣ ಮಂದರಭರಣ|
ವಂದಿತದೇವಗಣ—ಹರೇ ಕೃಷ್ಣ||

ರತಿಪತಿಜನಕ ಶ್ರಿತಸಂರಕ್ಷಕ|
ನುತಯದುಕುಲತಿಲಕ—ಹರೇ ಕೃಷ್ಣ||

ವಿಧಿನುತಶೀಲ ವಿಜಯಗೋಪಾಲ|
ವೇದನಿಕರಪಾಲ—ಹರೇ ಕೃಷ್ಣ||

                                       —-ವಿಜಯದಾಸ

Leave a Comment

Your email address will not be published. Required fields are marked *