ಪಾಲಿಸೆನ್ನನು ದೇವಾ ಪರಮ ಪುರುಷಾ
ಭೂಲೋಲ ಶ್ರೀ ಮುಷ್ಣನಿಲಯ ಶ್ವೇತ ವರಹಾ
ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನು
ಪಯೋನಿಧಿಸುತೆಯಿಂದ ತುತಿಸಿಕೊಳ್ಳುತಾ
ಜಯಜಯದೇವನಾಶ್ರಯ ಕಾಮಧೇನು ನೀ
ದಯಮಾಡಿ ನೋಡುವದು ದಾಸ ನೆನೆಸುವದು ||1||
ಚಿತ್ತಾವಧಾರು ಪರಾಕು ಬೊಮ್ಮಾಂಡವನು
ಹೊತ್ತು ನಸುನಗು ನಾಗಾರಿಗಮನಾ
ಮುತ್ತು ಮಣಿ ಮಯದಾಭರಣದಿಂದೆಸೆವ ದೇ
ವೋತ್ತಮನೆ ದಾನವರ ಬಲವಳಿದಾ ಧೈರ್ಯ ||2||
ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡು
ಪ್ರತ್ಯಕ್ಷವಾಗಿ ವರಗಳನೀವುತ
ಸತ್ಯ ಸಂಕಲ್ಪ ಸಿರಿ ವಿಜಯವಿಠ್ಠಲ ವರಹ
ಭೃತ್ಯನೆನೆಸಿ ನಿನ್ನ ಸ್ತೋತ್ಯದೊಳಗಿಡು ದೇವಾ||3||