ಪರಮ ಪುರುಷ ಹರಿ ಗೋವಿಂದ

ಪರಮ ಪುರುಷ ಹರಿ ಗೋವಿಂದ – ಸಿರಿವರ ನಾರಾಯಣ ಗೋವಿಂದ

ನಿಶೆವೆಸರಸುರನ ಉಸಿರ ತೊಲಗಿಸಿದೆಕುಸುಮ ಶರನ ಪಿತ ಗೋವಿಂದವಸು ಪೂರಿತ ಶ್ರುತಿ ಮಸುಳಿಸದೆ ತಂದೆಬಿಸಜ ಸಂಭವನಯ್ಯ ಗೋವಿಂದ ||1||

ಜತನದಿ ಮಧುಮಥನದಿ ಮಂದರ ಪರುವತ ಉದ್ಧರಿಸಿದೆ ಗೋವಿಂದಶತ ಕ್ರತುವಿನ ಸಿರಿ ಗತವಾಗದ ಮುನ್ನಕ್ಷಿತಿ ಪೆತ್ತನಯ್ಯ ಗೋವಿಂದ ||2||

ಭೂತಳವೆರಸಿ ರಸಾತಳಕಿಳಿದಿಹಪಾತಕನ ಕಂಡೆ ಗೋವಿಂದಆತನೊಡನೆ ಕಾದಾತನ ಗೆಲಿದು ಮ-ಹೀತಳವನು ತಂದೆ ಗೋವಿಂದ ||3||

ದುರುಳಾಸುರನ ನಡುಗರುಳ ಮಾಲೆ ಮುಂ-ಗೊರಳೊಳು ಧರಿಸಿದೆ ಗೋವಿಂದಗರಳ ಕೊರಳನು ಬೆರಳೆತ್ತಿ ಪೊಗಳಲುತರಳಗೊಲಿದೆ ನೀ ಗೋವಿಂದ||4||

ವಾಮನನಾಗಿ ನಿಸ್ಸೀಮ ಬಲಿಯ ಕೈಯಭೂಮಿಯನಳೆಕೊಂಡೆ ಗೋವಿಂದತಾಮರಸ ಪದದಿ ಕನಕ ಗರ್ಭಯೋಗವ್ಯೋಮ ಗಂಗೆಯ ತಂದೆ ಗೋವಿಂದ ||5||

ಸುರ ಪಶುವಿಗೆ ಋಷಿಯನು ಕೊಂದನ ಬಹುಕರ ಬಲ ಮುರಿದೆಯೊ ಗೋವಿಂದತರ ಹರಿಸದೆ ವಸುಧೆಯ ಒಡೆತನ ಭೂಸುರರಿಗೆ ನೀಡಿದೆ ಗೋವಿಂದ ||6||

ತ್ರಿಣಯನ ತಾತ್ಪರ್ಯ ರಾವಣನ ಶಿರರಣದೊಳುರುಳಿಸಿದೆ ಗೋವಿಂದಕ್ಷಣಮೆಣಿಸದೆ ಸದ್ಗುಣವಂತ ವಿಭೀ-ಷಣಗಭಯವಿತ್ತೆ ಗೋವಿಂದ ||7||

ಮಾರಣ ಕ್ರತು ಸಂಪೂರಣ ಕಂಸ ಸಂ-ಹಾರಣ ಭುಜಬಲ ಗೋವಿಂದವಾರಣಪುರಪತಿ ಸಿರಿ ಭೂಭಾರೋತ್ತಾರಣ ಬಲಯುತ ಗೋವಿಂದ ||8||

ಕಥೆಯನು ನಿರ್ಮಿಸಿ ಪತಿವ್ರತೆಯರ ಘನವ್ರತಗಳ ಕೆಡಿಸಿದೆ ಗೋವಿಂದಜತೆಯಗಲದ ಪುರ ತ್ರಿತಯ ಗೆಲಿದು ದೇ-ವತೆಗಳ ಸಲಹಿದೆ ಗೋವಿಂದ ||9||

ಜಾಜಿಯ ಮರಕತ ತೇಜಿಯನೇರಿ ವಿ-ರಾಜಿಪ ರಾವುತ ಗೋವಿಂದಸೂಜಿಯ ಬೆನ್ನೊಳು ರಾಜಿಪ ತೆರದಿ ಸ-ಹಜರೊಳಡಗಿರ್ಪ ಗೋವಿಂದ ||10||

ಮೇದಿನಿಗೋಸುಗ ಕಾದಿ ಕಲಹದಿ ವಿ-ರೋಧಿಗಳ ಕೊಂದೆ ಗೋವಿಂದಸಾಧುಗಳಿಗೆ ಸುಖವೀಯುವ ಬಾಡದಶ್ರೀಧರ ಕೇಶವ ಗೋವಿಂದ ||11||

Leave a Comment

Your email address will not be published. Required fields are marked *